ಆಲ್ ಓಕೆ ಎಂದು ಕರೆಯಲ್ಪಡುವ ಅಲೋಕ್ ಆರ್. ಬಾಬು (ಜನನ ೨ ಮೇ ೧೯೮೯), ಒಬ್ಬ ಭಾರತೀಯ ಕನ್ನಡ ರಾಪರ್, ಗಾಯಕ, ನಟ ಮತ್ತು ಸಂಗೀತ-ನಿರ್ಮಾಪಕ. ಅವರು ಡೋಂಟ್ ವರಿ, ಯಾಕಿಂಗೆ, ಹ್ಯಾಪಿ, ನಾನ್ ಕನ್ನಡಿಗ, ದೇಜಾ ವು, ಅರ್ಬನ್ ಲಾಡ್ಸ್ ಮತ್ತು ಇನ್ನೂ ಅನೇಕ ಕನ್ನಡ ರಾಪ್ ಹಾಡುಗಳನ್ನು ಹಾಡಿದ‍್ದಾರೆ. == ವೈಯಕ್ತಿಕ ಜೀವನ == ರಮೇಶ್ ಬಾಬು ಮತ್ತು ತಾರಾ ರಮೇಶ್ ದಂಪತಿ ಅವರ ಮೊದಲ ಪುತ್ರ. ಅವರಿಗೆ ಒಬ್ಬಳು ಸಹೋದರಿ ಇದ್ದಾರೆ. ಅವರು ಜಯನಗರದ ಶ್ರೀ ಭಗವಾನ್ ಮಹಾವೀರ್ ಜೈನ್ ಕಾಲೇಜಿನಲ್ಲಿ ತಮ್ಮ ಪಿಯುಸಿಯನ್ನು ಪೂರ್ಣಗೊಳಿಸಿದರು, ಮತ್ತು ನಂತರ ಬೆಂಗಳೂರಿನ ಸಿಟಿ ಕಾಲೇಜ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್‌ನಲ್ಲಿ ತಮ್ಮ ಬಿಬಿಎಂ ಪದವಿಯನ್ನು ಪಡೆದರು. ಅವರ ಕನ್ನಡದ ಮೊದಲ ರಾಪ್ ಹಾಡು 'ಯಂಗ್ ಎಂಗೋ' ಹಾಡು. ಅಂದಿನಿಂದ, ಆಲ್ ಓಕೆ ಕನ್ನಡದ ಹಿಪ್-ಹಾಪ್‌ನ ಹೊಸ ಪ್ರತಿಭೆಗಳನ್ನು ನಿರ್ಮಿಸಿದೆ. ಅವರು ನವೆಂಬರ್, ೨೦೧೯ರಲ್ಲಿ ನಿಶಾ ನಟರಾಜನ್ ಅವರನ್ನು ವಿವಾಹವಾದರು. == ವೃತ್ತಿ == ಅವರು ಕನ್ನಡದ ಮೊದಲ ಹಿಪ್-ಹಾಪ್ ಬ್ಯಾಂಡ್ ಮತ್ತು ಆಲ್ಬಂ 'ಅರ್ಬನ್ ಲಾಡ್ಸ್' ನಲ್ಲಿ ಪ್ರಮುಖ ಗಾಯಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು, ಮತ್ತು ಕನ್ನಡದ ಹಿಟ್ ಚಲನಚಿತ್ರ ಜೋಶ್‌ ನಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ. ಅಂದಿನಿಂದ ಅವರು ಐದು ವಿಭಿನ್ನ ಭಾಷೆಗಳಲ್ಲಿ ಇಪ್ಪತ್ತೈದಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು ಅನೇಕ ಸ್ವತಂತ್ರ ಸಂಗೀತ ವೀಡಿಯೊಗಳನ್ನು ಸಂಯೋಜಿಸಿದ್ದಾರೆ ಹಾಗೂ ನಿರ್ದೇಶಿಸಿದ್ದಾರೆ. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದಿದ್ದಾರೆ. ಆಲ್ ಓಕೆಯ ಪ್ರಸಿದ್ಧ ಟ್ರ್ಯಾಕ್‌ಗಳಲ್ಲಿ ಒಂದಾದ 'ಡೋಂಟ್ ವರಿ' ಅನ್ನು ಜನಪ್ರಿಯ ಆರ್‌ಜೆ ಅಶಾಂತಿ ಓಂಕಾರ್ ಹೋಸ್ಟ್ ಮಾಡಿದ ಬಿಬಿಸಿ ರೇಡಿಯೋ ಲಂಡನ್‌ನಲ್ಲಿ ಪ್ಲೇ ಮಾಡಲಾಗಿದೆ .ಜೊತೆಗೆ, ಆಲ್ ಓಕೆ ಡೋಂಟ್ ವರಿ, ರೋಲಿಂಗ್ ಸ್ಟೋನ್ ಇಂಡಿಯಾದಲ್ಲಿ ಕಾಣಿಸಿಕೊಂಡಿದೆ. == ಚಿತ್ರಕಥೆ == == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಅಂತರಜಾಲ ಸಿನೆಮಾ ದತ್ತಸಂಚಯದಲ್ಲಿ ಆರ್. ಬಾಬು(ಆಲ್ ಓಕೆ) [[ವರ್ಗ:ಜೀವಂತ ವ್ಯಕ್ತಿಗಳು]] [[ವರ್ಗ:೧೯೮೯ ಜನನ]]